Friday, January 28, 2011

ಫೆಬ್ರವರಿ ನಾಲ್ಕರಿಂದ ಮೂರುದಿನ ನಡೆಯಲಿರುವ ಕೃಷಿಮೇಳದ ಪೂರ್ವ ತಯಾರಿಯು ಜನವರಿ  ಆರರಿಂದ ಆರಂಭಗೊಂಡಿದ್ದು ಇಂದಿನವರೆಗೆ ಶೇಕಡಾ 75 ರಷ್ಟು ಕೆಲಸಗಳು ಮುಗಿದಿದ್ದು ಬಾಕಿ ಕೆಲಸಗಳು  ಭರದಿಂದ ಸಾಗುತ್ತಿದೆ. ಅಡುಗೆ ಚಪ್ಪರ,40 ±Ëಚಾಲಯ ನಿರ್ಮಾಣ, ಜಾನುವಾರು ಮತ್ತು ಶ್ವಾನ ಪ್ರದರ್ಶನಕ್ಕೆ ತಯಾರಿ,ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ತಯಾರಿ,ಗುಟ್ಟಿನ ಮನೆ,ನೀರು ಪೂರೈಕೆಗೆ ಪೈಪ್ ಲೈನ್ ವ್ಯವಸ್ತೆ,  ಆಲೆಮನೆ ತಯಾರಿ,ಚಪ್ಪರಗಳು ಸೇರಿದಂತೆ ಇನ್ನಿತರ ಪೂರ್ವ ಸಿದ್ದತೆಗಳು ಭರದಿಂದ ಸಾಗುತ್ತಿದೆ,
ಕೃಷಿ ಮೇಳದ ಸ್ವಾಗತ ಸಮೀತಿಯ ವತಿಯಿಂದ ಬಜಗೋಳಿಯ ಆಸುಪಾಸಿನಲ್ಲಿ ಏಳು ಸ್ವಾಗತ ದ್ವಾರಗಳು ನಿರ್ಮಾಣಗೊಳ್ಳುತ್ತಿದೆ,ಗ್ರಾಮಾಭಿವ್ರದ್ದಿಯ ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ಕಾರ್ಕಳ ಬೆಳ್ತಂಗಡಿ ಮೂಡಬಿದಿರೆಗಳಲ್ಲಿ ಕೂಡ ಸ್ವಾಗತ ದ್ವಾರಗಳು ನಿರ್ಮಾಣಗೊಂಡಿದೆ,31ನೇ ಕೃಷಿ ಮೇಳದ ಮೆರವಣಿಗೆಯಲ್ಲಿ 31 ತರಹದ ಟ್ಯಾಬ್ಲೋಗಳನ್ನೂ ಮೆರವಣಿಗೆಯಲ್ಲಿ ಅಳವಡಿಸುವ ಚಿಂತನೆ ನಡೆಯುತ್ತಿದೆ,ಬಜಗೋಳಿಯ ಸುತ್ತ ಮುತ್ತ ಹಬ್ಬದ ವಾತಾವರಣ  ಸೃಷ್ಟಿಯಾಗಿದೆ.













 

No comments:

Post a Comment